(Prana pratistapana) of Maha Ganapati, Sri Krishna and Maha Lakshmi in the newly built temple.

ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ಮಹಾ ಗಣಪತಿ, ಶ್ರೀ ಕೃಷ್ಣ ಮತ್ತು ಮಹಾ ಲಕ್ಷ್ಮಿಯರ ಪ್ರತಿಷ್ಠಾಪನೆ (ಪ್ರಾಣ ಪ್ರತಿಷ್ಠಾಪನೆ).
Prana Pratistapana | ಪ್ರಾಣ ಪ್ರತಿಷ್ಠಾಪನೆ - 03 Jul 2026 Prana Pratistapana | ಪ್ರಾಣ ಪ್ರತಿಷ್ಠಾಪನೆ - 03 Jul 2026

ಓಂ ನಮೋ ಭಗವತೇ ವಾಸುದೇವಾಯ

Sri Krishna Garden Temple

ಶ್ರೀ ಕೃಷ್ಣ ಗಾರ್ಡನ್ ದೇವಸ್ಥಾನ

A sacred Vaishnavite temple dedicated to Lord Krishna, built in the traditional South Indian architectural style.

ಮಹಾ ಗಣಪತಿ, ಶ್ರೀ ಕೃಷ್ಣ ಮತ್ತು ಮಹಾ ಲಕ್ಷ್ಮಿಯರ ಪ್ರತಿಷ್ಠಾಪನೆ (ಪ್ರಾಣ ಪ್ರತಿಷ್ಠಾಪನೆ)

Welcome to Our Temple

ನಮ್ಮ ದೇವಸ್ಥಾನಕ್ಕೆ ಸ್ವಾಗತ
Temple Deities

ಪ್ರಾಣ ಪ್ರತಿಷ್ಠಾಪನೆ

We are in preparation of Consecration ( Prana pratistapana) of Maha Ganapati, Sri Krishna and Maha Lakshmi in the newly built temple. Considering the auspicious occasion, the date we have decided is on 3rd of July 2026 . The temple has come up very well because of your contributions and wishes. We humbly request all devotees and well-wishers to participate in this sacred occasion and seek the blessing of Lord Krishna

2026 ರ ಜುಲೈ 3 ರ ಶುಭ ದಿನವನ್ನು ಪರಿಗಣಿಸಿ, ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ಮಹಾ ಗಣಪತಿ, ಶ್ರೀ ಕೃಷ್ಣ ಮತ್ತು ಮಹಾ ಲಕ್ಷ್ಮಿಯರ ಪ್ರತಿಷ್ಠಾಪನೆ (ಪ್ರಾಣ ಪ್ರತಿಷ್ಠಾಪನೆ) ಗೆ ಸಿದ್ಧತೆಗಳು ನಡೆಯುತ್ತಿವೆ ನಿಮ್ಮ ಕೊಡುಗೆ, ಬೆಂಬಲ ಮತ್ತು ಪ್ರೋತ್ಸಾಹದಿಂದಾಗಿ ದೇವಾಲಯದ ಕಟ್ಟಡವು ಸುಂದರವಾಗಿ ರೂಪುಗೊಂಡಿದೆ. ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಲು ಭಕ್ತಾದಿಗಳಲ್ಲಿ ವಿನಂತಿಸಿಕೊಳ್ಳುತ್ತೇವೆ.

ಪ್ರಸಾದ ಸೇವೆ
ಅನ್ನದಾನ ಸೇವೆ (ಭೋಜನ ಪ್ರಸಾದ)
ಕುಂಭಾಭಿಷೇಕ ಸೇವೆ
Read More About Us

Prana Pratistapana

ಪ್ರಾಣ ಪ್ರತಿಷ್ಠಾಪನೆ
Prana Pratistapana
Prana Pratistapana

( Prana Pratistapana) of Maha Ganapati, Sri Krishna and Maha Lakshmi in the newly built temple. scheduled from 1st of July until 3rd of July. We humbly request all devotees and well-wishers to participate in this sacred occasion and seek the blessing of Lord Krishna ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ಮಹಾ ಗಣಪತಿ, ಶ್ರೀ ಕೃಷ್ಣ ಮತ್ತು ಮಹಾ ಲಕ್ಷ್ಮಿಯರ ಪ್ರತಿಷ್ಠಾಪನೆ (ಪ್ರಾಣ ಪ್ರತಿಷ್ಠಾಪನೆ). ಕಾರ್ಯಕ್ರಮವು ಜುಲೈ 1 ರಿಂದ ಜುಲೈ 3 ರವರೆಗೆ ನಡೆಯಲಿದೆ. ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಲು ಭಕ್ತಾದಿಗಳಲ್ಲಿ ವಿನಂತಿಸಿಕೊಳ್ಳುತ್ತೇವೆ.

Temple Timings

ದೇವಸ್ಥಾನದ ಸಮಯ
Pooja / Event Time
ಗೋದೂಳಿ ಲಗ್ನದಲ್ಲಿ ಗುರು ಗಣಪತಿ ಪ್ರಾರ್ಥನೆ, ಸ್ವಸ್ತಿವಾಚನ, ಸಭಾ ಪ್ರಾರ್ಥನೆ, ಮೃತ್ಸಂಗ್ರಹಣ, ಗಂಗಾ ಭಾಗೀರತಿ ಪೂಜೆ, ಗೋ ಪೂಜೆ, ದೇವಾಲಯ, ಯಾಗಶಾಲಾ ಪ್ರವೇಶ, ಪ್ರಾಯಶ್ಚಿತ್ತ ಮಹಾ ಸಂಕಲ್ಪ, ವಿಶ್ವಕ್ಸೇನ ಪೂಜೆ, ಮಹಾ ಗಣಪತಿ ಪೂಜೆ, ವಾಸುದೇವ ಮತ್ಸ್ಯಾತ, ಪಂಚಗವ್ಯ ಆರಾಧನೆ ಮೇಳನ, ರಕ್ಷಾ ಸೂತ್ರ ಪೂಜೆ, ಬಂಧನ, ಜಂಬುಶುದ್ಧಿ, ಪಂಚಗವ್ಯ ಅಭಿಷೇಕ, ಅಂಕುರಾರ್ಪಣ, ವಾಸ್ತು ಪೂಜೆ, ವಾಸ್ತು ರಾಕ್ಷೋಘ್ನ ಹೋಮ, ವಿಶ್ವಲಹರಣ, ಪರಿಯಾಗ್ನಿ ಕರಣ ಆರತಿ – ತೀರ್ಥ ಪ್ರಸಾದ ವಿನಿಯೋಗ 01.07.2026 ಬುಧವಾರ ಪ್ರಥಮ ಪೂರ್ವಾಷಾಢ ನಕ್ಷತ್ರ ಸಂಜೆ 4.00 ಗಂಟೆ ಇಂದ ರಾತ್ರಿ 8.30 ರವರೆಗೆ
ವೇದಪಾರಾಯಣ, ಸುಪ್ರಭಾತ ಸೇವೆ, ದ್ವಾರ ತೋರಣ, ಧ್ವಜ ಕುಂಭಾರಾಧನೆ, ವೇದಿಶಾರ್ಪನೆ, ಕಲಶ ಸ್ಥಾಪನೆ, ಸಹಸ್ರ ಮೋದಶ ಮಹಾಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪಂಚಸೂಕ್ತ ಹೋಮ, ಲಘು ಪೂರ್ಣಾಹುತಿ, ನವಾಧಿವಾಸ – ಮಹಾಮಂಗಳಾರತಿ – ತೀರ್ಥ ಪ್ರಸಾದ ವಿನಿಯೋಗ 02.07.2026 ಗುರುವಾರ ದ್ವಿತೀಯ ಉತ್ತರಾಷಾಢ ನಕ್ಷತ್ರ ಬೆಳಗ್ಗೆ 6.00 ಗಂಟೆ ಇಂದ ಮಧ್ಯಾಹ್ನ 12.00 ಗಂಟೆಯವರೆಗೆ
ವೇದಪಾರಾಯಣ ನಿತ್ಯವಿಧಿ, ಪ್ರತಿಷ್ಠಾಂಗ ಕಲಶಾರಾಧನೆ, ನಿತ್ಯ ಹೋಮ, ಸುದರ್ಶನ ಹೋಮ, ಆದಿವಾಸಾಂಗ ಹೋಮ, ಲಘು ಪೂರ್ಣಾಹುತಿ, ಶಯ್ಯಾಧಿವಾಸ, ನಿದ್ರಾಕಲಶ ಸ್ಥಾಪನೆ, ಅಷ್ಟಾವಧಾನ ಸೇವೆ 02.07.2026 ಗುರುವಾರ ದ್ವಿತೀಯ ಉತ್ತರಾಷಾಢ ನಕ್ಷತ್ರ ಸಂಜೆ 4.30 ಗಂಟೆ ಇಂದ 6.30 ಗಂಟೆಯವರೆಗೆ
"ನೂತನ ವಿಗ್ರಹಗಳ ಅಷ್ಟ ಬಂಧನ ಪ್ರತಿಷ್ಠೆ. ರಾತ್ರಿ 7.00 ಗಂಟೆಗೆ ದೇವರಿಗೆ ಅಷ್ಟಬಂಧನ ಪ್ರತಿಷ್ಠಾಪನಾ ಸಮಯದಲ್ಲಿ, ಪೀಠದಲ್ಲಿ ಹಾಕಲು ಚಿನ್ನ, ಬೆಳ್ಳಿ, ವಜ್ರ ವೈಡೂರ್ಯ, ನವರತ್ನಗಳನ್ನು ಅರ್ಪಿಸಲು ಇಚ್ಛಿಸುವವರು, ತಮ್ಮ ಸ್ವಹಸ್ತದಿಂದ ಅರ್ಪಿಸಲು ಅವಕಾಶ ಇರುತ್ತದೆ. ಮಂಗಳಾರತಿ – ತೀರ್ಥ ಪ್ರಸಾದ ವಿನಿಯೋಗ" 02.07.2026 ಗುರುವಾರ ದ್ವಿತೀಯ ಉತ್ತರಾಷಾಢ ನಕ್ಷತ್ರ ರಾತ್ರಿ 7.00 ಗಂಟೆ ಇಂದ 9.00 ಗಂಟೆಯವರೆಗೆ
ಮೂಲ ದೇವರಿಗೆ ನೇತ್ರೋನ್ಮೀಲನ, ಪ್ರಾಣ ಪ್ರತಿಷ್ಠೆ, ದೀಪದೇನು ದರ್ಶನ, ನಿರೀಕ್ಷಣೆ, ಗೋ ಪೂಜೆ, ನಾಡಿ ಸಂಧಾನ. 03.07.2026 ಶುಕ್ರವಾರ ಚತುರ್ಥಿ ಶ್ರವಣ ನಕ್ಷತ್ರ - ನಿರೀಕ್ಷಣಾ ಬೆಳಗ್ಗೆ 3.45 ಗಂಟೆ ಇಂದ 4.30 ರ ಬ್ರಾಹ್ಮಿ ಸಮಯದಲ್ಲಿ ಸಲ್ಲುವ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ
ನೂತನ ವಿಗ್ರಹಗಳಿಗೆ ಫಲಪಂಚಾಮೃತ ಅಭಿಷೇಕ, ಷೋಡಶದ್ರವ್ಯಾಭಿಷೇಕ, ತಿರುಮಂಜನ ಸೇವೆ 03.07.2026 ಶುಕ್ರವಾರ ಚತುರ್ಥಿ ಶ್ರವಣ ನಕ್ಷತ್ರ - ಬೆಳಗ್ಗೆ 5.30 ರಿಂದ 6.30 ರವರೆಗೆ
ಜೀವಾದಿ ತತ್ತ್ವನ್ಯಾಸ, ಕಲಾದಿ ಹೋಮ, ಪ್ರತಿಷ್ಠಾಂಗ ಹೋಮ, ಶ್ರೀ ಕೃಷ್ಣ ಮೂಲ ಮಂತ್ರ ಹೋಮ, ಜಯಾದಿ ಹೋಮ, ಪ್ರಾಯಶ್ಚಿತ್ತ ಹೋಮ, ಮಹಾ ಪೂರ್ಣಾಹುತಿ 03.07.2026 ಶುಕ್ರವಾರ ಚತುರ್ಥಿ ಶ್ರವಣ ನಕ್ಷತ್ರ - ಬೆಳಗ್ಗೆ 7.00 ಗಂಟೆಯಿಂದ 9.00 ಗಂಟೆಯವರೆಗೆ
ಕುಂಭಾಭಿಷೇಕ, ವಸ್ತ್ರ ಮತ್ತಾಲಂಕಾರ, ರಾಷ್ಟ್ರಾಶೀರ್ವಾದ ಮಹಾಮಂಗಳಾರತಿ – ತೀರ್ಥ ಪ್ರಸಾದ ವಿನಿಯೋಗ 03.07.2026 ಶುಕ್ರವಾರ ಚತುರ್ಥಿ ಶ್ರವಣ ನಕ್ಷತ್ರ -ಬೆಳಗ್ಗೆ 9.50 ರಿಂದ 10.35 ಸಿಂಹ ಲಗ್ನದ ಶುಭ ಮುಹೂರ್ತದಲ್ಲಿ
ಕೃತಜ್ಞಾಪೂರ್ವಕವಾಗಿ ಎಲ್ಲಾ ಮಹಾದಾನಿಗಳಿಗೆ ಗೌರವ ಸನ್ಮಾನ. ದಾನಿಗಳು ಸಭಾಲಕ್ಷ ಅಗಮಿಸಬೇಕಾಗಿ ಟ್ರಸ್ಟ್ ಪರವಾಗಿ ವಿನಂತಿಸಿಕೊಳ್ಳುತ್ತೇವೆ 03.07.2026 ಶುಕ್ರವಾರ ಚತುರ್ಥಿ ಶ್ರವಣ ನಕ್ಷತ್ರ - "ಸಭಾ ಕಾರ್ಯಕ್ರಮ: ಸಂಜೆ 5.00 ರಿಂದ 6.00 ರ ವರೆಗೆ."
ನಂದನ ಸಾಂಸ್ಕೃತಿಕ ಸಂಘ, ಶ್ರೀ ಕೃಷ್ಣ ಗಾರ್ಡನ್ಸ್ ಬಡಾವಣೆ, ಯಶಸ್ವಿನಿ ಮಹಿಳಾ ಸಂಘ ಕಾರ್ಯಕ್ರಮ ಬಡಾವಣೆ ಮತ್ತು ಇತರೆ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಷ್ಣು ಸಹಸ್ರನಾಮ ಪಾರಾಯಣ 03.07.2026 ಶುಕ್ರವಾರ ಚತುರ್ಥಿ ಶ್ರವಣ ನಕ್ಷತ್ರ -ಸಂಜೆ 6.00 ಗಂಟೆ ಇಂದ 8.00 ಗಂಟೆಯವರೆಗೆ
ಮಹಾಮಂಗಳಾರತಿ – ತೀರ್ಥ ಪ್ರಸಾದ ವಿನಿಯೋಗ 03.07.2026 ಶುಕ್ರವಾರ ಚತುರ್ಥಿ ಶ್ರವಣ ನಕ್ಷತ್ರ -ರಾತ್ರಿ 8.30 ಗಂಟೆಗೆ

Visit Us

ನಮ್ಮನ್ನು ಭೇಟಿ ಮಾಡಿ
Address

C/o. CA Site, 4th Cross, D Block, Service Road, Shri Krishna Garden, R.V.C Post, Bengaluru – 560 059